ಪುಷ್ಪ 2 ಫಸ್ಟ್ ಸಾಂಗ್ ರಿಲೀಸ್..! ಪುಷ್ಪರಾಜ್ ಅಬ್ಬರಕ್ಕೆ ಎಲ್ಲಾ ದಾಖಲೆಗಳು ಉಢೀಸ್
Pushpa 2 First Song : ಬಹುನಿರೀಕ್ಷಿತ ಪುಷ್ಪ 2: ದಿ ರೂಲ್ ಸಿನಿಮಾ 6 ಭಾರತೀಯ ಭಾಷೆಗಳಲ್ಲಿ ಆಗಸ್ಟ್ 15, 2024 ರಂದು ಬಿಡುಗಡೆಯಾಗಲು ಸಜ್ಜಾಗುತ್ತಿದೆ. ಇದರ ನಡುವೆ ಚಿತ್ರತಂಡ ಅಭಿಮಾನಿಗಳಿಗೆ ಬೂಸ್ಟ್ ನೀಡಲು ಮುಂದಾಗಿದ್ದು ಚಿತ್ರತಂಡ ಚಿತ್ರದ ಫಸ್ಟ್ ಸಿಂಗಲ್ ಸಾಂಗ್ ರಿಲೀಸ್ (Pushpa2 First Single) ರಿಲೀಸ್ ಮಾಡಿದೆ.
ಹೌದು… ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಈ ಬಹು ನಿರೀಕ್ಷಿತ ಪ್ಯಾನ್-ಇಂಡಿಯನ್ ಪ್ರಾಜೆಕ್ಟ್ ಅನ್ನು ಪ್ರತಿಭಾನ್ವಿತ ನಿರ್ದೇಶಕ ಸುಕುಮಾರ್ ನಿರ್ದೇಶಿಸಿದ್ದಾರೆ. ಇಂದು ಸಂಜೆ 5 ಗಂಟೆಗೆ ಬಿಡುಗಡೆಯಾದ ಫಸ್ಟ್ ಸಾಂಗ್ ಪುಷ್ಪಾ ..ಪುಷ್ಪಾ .. ಸಖತ್ತಾಗಿದ್ದು, ಪುಷ್ಪರಾಜ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಈಗಾಗಲೇ ಈ ಕುರಿತ ಪೋಸ್ಟರ್ ಬಿಡುಗಡೆಯಾಗಿದೆ.ಚಿತ್ರದಲ್ಲಿ ಸುನಿಲ್, ಫಹದ್ ಫಾಸಿಲ್ ಮತ್ತು ಅನಸೂಯಾ ಭಾರದ್ವಾಜ್ ಸೇರಿದಂತೆ ದೊಡ್ಡ ಕಲಾವಿದರ ದಂಡಿದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ನೇತೃತ್ವವನ್ನು ವಹಿಸಿದರೆ, ರಾಕ್ ಸ್ಟಾರ್ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ..
ಸಿನಿಮಾ ಸುದ್ದಿಗಳು, ಲೆಟೆಸ್ಟ್ ಅಪ್‌ಡೆಟ್ಸ್‌ಗಾಗಿ ಈಗಲೇ ನಮ್ಮ Movie Magic ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಿ
Facebook Link – http://surl.li/sinyi
Instagram Link – http://surl.li/sinyq
WhatsApp Channel- http://surl.li/sinza
Share this content:
Post Comment