Amrita Pandey : ನೇಣು ಬಿಗಿದ ಸ್ಥಿತಿಯಲ್ಲಿ ಖ್ಯಾತ ನಟಿಯ ಶವ ಪತ್ತೆ..!ವಾಟ್ಸಾಪ್ ಸ್ಟೇಟಸ್ ನಲ್ಲಿ ಏನಿತ್ತು ಗೊತ್ತೆ..
Amrita Pandey found dead : ಜನಪ್ರಿಯ ಭೋಜ್ಪುರಿ ನಟಿ ಅಮೃತಾ ಪಾಂಡೆ ಶನಿವಾರ (ಏಪ್ರಿಲ್ 27)ದಂದು ಬಿಹಾರದ ಭಾಗಲ್ಪುರದ ತಮ್ಮ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ವರದಿಯ ಪ್ರಕಾರ, ಅಮೃತಾ ಮೃತದೇಹ ದಿವ್ಯ ಧಾಮ್ ಅಪಾರ್ಟ್ಮೆಂಟ್ನಲ್ಲಿರುವ ತಮ್ಮ ಮನೆಯಲ್ಲಿ ಸೀರೆಯಿಂದ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದ ತಿಳಿದುಬಂದಿದೆ.
ಕುಟುಂಬಸ್ಥರು ಆಕೆಯ ದೇಹವನ್ನು ಕೆಳಗಿಳಿಸಿ ಹತ್ತಿರದ ಆಸ್ಪತ್ರೆಗೆ ಸಾಗಿಸಿದರು. ಆದರೆ ವೈದ್ಯರ ಈಗಾಗಲೇ ನಟ ಸಾವನ್ನಪ್ಪಿದ್ದಾಗಿ ಘೋಷಿಸಿದರು. ಅಲ್ಲದೆ, ಸಾವಿಗೂ ಕೆಲವು ಗಂಟೆಗಳ ಮೊದಲು, ಅಮೃತಾ ತನ್ನ ವಾಟ್ಸಾಪ್ ಸ್ಟೇಟಸ್ನಲ್ಲಿ ಅವರ ಜೀವನ ಎರಡು ದೋಣಿಗಳಲ್ಲಿದೆ ಎಂದು ಬರೆದುಕೂಂಡು ಪೊಸ್ಟ್ ಹಂಚಿಕೊಂಡಿದ್ದರು.
2022 ರಲ್ಲಿ, ಅಮೃತಾ ಛತ್ತೀಸ್ಗಢದ ಬಿಲಾಸ್ಪುರದ ನಿವಾಸಿ ಚಂದ್ರಮಣಿ ಜಂಗಡ್ ಅವರೊಂದಿಗೆ ಮದುವೆಯಾದರು. ದಂಪತಿ ಮುಂಬೈನಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಕಳೆದ ಕೆಲವು ತಿಂಗಳಿಂದ ನಟಿ ಖಿನ್ನತೆಗೆ ಒಳಗಾಗಿದ್ದರು ಎಂದು ಕುಟುಂಬಸ್ಥರು ಹೇಳಿಕೊಂಡಿದ್ದಾರೆ.
ಅಮೃತಾ ಪಾಂಡೆ ಭೋಜ್ಪುರಿ ಸೂಪರ್ಸ್ಟಾರ್ ಖೇಸರಿ ಲಾಲ್ ಯಾದವ್ ಅವರೊಂದಿಗೆ “ದೀವಾನಪನ್” ಚಿತ್ರದಲ್ಲಿ ನಟಿಸಿದ್ದರು. ಜೋಗಸರ ಪೊಲೀಸ್ ಠಾಣೆಯು ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
ಸಿನಿಮಾ ಸುದ್ದಿಗಳು, ಲೆಟೆಸ್ಟ್ ಅಪ್ಡೆಟ್ಸ್ಗಾಗಿ ಈಗಲೇ ನಮ್ಮ Movie Magic ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಿ
Facebook Link – http://surl.li/sinyi
Instagram Link – http://surl.li/sinyq
WhatsApp Channel- http://surl.li/sinza
Share this content:
Post Comment