Loading Now

ವೈರಲ್‌ ಆಗುತ್ತಿರುವ ʼಮೂಕನಾಗಬೇಕುʼ ಹಾಡಿನ ನಿಜವಾದ ರಚನೆಕಾರ ಇವರೇ ನೋಡಿ..! “ಲಿರಿಕ್ಸ್‌” ಸಹ ಇಲ್ಲಿದೆ

ವೈರಲ್‌ ಆಗುತ್ತಿರುವ ʼಮೂಕನಾಗಬೇಕುʼ ಹಾಡಿನ ನಿಜವಾದ ರಚನೆಕಾರ ಇವರೇ ನೋಡಿ..! “ಲಿರಿಕ್ಸ್‌” ಸಹ ಇಲ್ಲಿದೆ

Mookanagabeku song lyrics : ಒಲ್ಡ್‌ ಇಸ್‌ ಗೋಲ್ಡ್‌ ಎನ್ನುವ ಹಾಗೆ ಇತ್ತೀಚಿಗೆ ಹಳೆಯ ಜಾನಪದ ಹಾಡುಗಳು ಮುನ್ನೆಲೆಗೆ ಬಂದು ಸಖತ್‌ ಸದ್ದು ಮಾಡುತ್ತಿವೆ. ಈ ಪೈಕಿ ಮೂಕನಾಬಬೇಕು ಜಗದೊಳು ಜ್ವಾಕ್ಯಾಗಿರಬೇಕು ಎನ್ನುವ ಹಾಡು ಸಧ್ಯ ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ.

ಹೌದು.. ಈ ಅದ್ಭುತ ಹಾಡನ್ನು ರಚಿಸಿದವರು, ಶ್ರೀ ಕಡಕೋಳ ಮಡಿವಾಳೇಶ್ವರರು. ಈ ಹಾಡನ್ನು ಪಂ, ರವೀಂದ್ರ ಹಂದಿಗನೂರು ಅವರು ಹಾಡಿದ್ದರು. ಅಲ್ಲದೆ, ಈ ಅರ್ಥಪೂರ್ಣ ಗೀತೆಯನ್ನು ಇತ್ತೀಚಿಗೆ ಸಿಂಪಲ್ ಸುನಿ ನಿರ್ದೇಶನದ, ವಿನಯ್ ರಾಜ್‌ಕುಮಾರ್ ಮುಖ್ಯಪಾತ್ರದಲ್ಲಿ ನಟಿಸಿರುವ ʼಒಂದು ಸರಳ ಪ್ರೇಮಕಥೆʼ ಚಿತ್ರದಲ್ಲಿ ಬಳಸಿಕೊಳ್ಳಲಾಗಿತ್ತು. ಅಂದಿನಿಂದ ಈ ಹಾಡನ್ನು ಬರೆದವರು ಯಾರು, ಇದರ ಲಿರಿಕ್ಸ್‌ ಎಲ್ಲಿವೆ ಅಂತ ಎಲ್ಲರೂ ಹುಡುಕಾಡುತ್ತಿದ್ದಾರೆ.. ಸಾಹಿತ್ಯ ನಿಮಗಾಗಿ..

ಮೂಕನಾಗಬೇಕು ಜಗದೊಳು ಜ್ವಾಕ್ಯಾಗಿರಬೇಕು
ಮೂಕನಾಗಬೇಕು ಜಗದೊಳು ಜ್ವಾಕ್ಯಾಗಿರಬೇಕು
ಕಾಕಬುದ್ಧಿ ಕಡೇ ಘಾಯಿಸಲಾರದೆ
ಕಾಕಬುದ್ಧಿ ಕಡೇ ಘಾಯಿಸಲಾರದೆ
ಲೋಕದ ಗೊಡವೀ ನಿನಗ್ಯಾಕ ಬೇಕು
ಮೂಕನಾಗಬೇಕು.. ಜಗದೊಳು ಜ್ವಾಕ್ಯಾಗಿರಬೇಕು

ಮಾತು ಕಲಿಯ ಬೇಕೂ, ಮಾತಿನ ಮರ್ಮ ತಿಳೀಬೇಕು
ಮಾತು ಕಲಿಯ ಬೇಕು, ಮಾತಿನ ಮರ್ಮ ತಿಳೀಬೇಕು
ಮಾತು ಬಲ್ಲ ಮಹಾ ಜ್ಞಾನಿಯಕೂಡ
ಮಾತು ಬಲ್ಲ ಮಹಾ ಜ್ಞಾನಿಯಕೂಡ
ಕೋತಿ ಹಾಂಗ ಬೆನ್ ಹತ್ತಿರಬೇಕು
ಮೂಕನಾಗಬೇಕು ಜಗದೊಳು ಜ್ವಾಕ್ಯಾಗಿರಬೇಕು

ತತ್ವ ಕಲೀಬೇಕೂ, ತತ್ವದಾ ಅರ್ಥ ತಿಳೀಬೇಕು
ತತ್ವ ಕಲೀಬೇಕೂ, ತತ್ವದ ಅರ್ಥ ತಿಳೀಬೇಕು
ತತ್ವ ಬಲ್ಲ ಮಹಾ ಜ್ಞಾನಿಯಕೂಡ
ತತ್ವ ಬಲ್ಲ ಮಹಾ ಜ್ಞಾನಿಯಕೂಡ
ಕತ್ತೀ ಹಾಂಗ ಬೆನ್ ಹತ್ತಿರಬೇಕು
ಮೂಕನಾಗಬೇಕು ಜಗದೊಳು ಜ್ವಾಕ್ಯಾಗಿರಬೇಕು

ಆಸೆಯನಳೀಬೇಕೂ ಮನಸಿನಾ ಹೇಸಿಕಿ ತೊಳೀಬೇಕು
ಆಸೆಯನಳಿಬೇಕೂ ಮನಸಿನಾ ಹೇಸಿಕಿ ತೊಳೀಬೇಕು
ಆಸೆಯನಳಿದು ಹೇಸಿಕಿ ತೊಳೆದು ಈಶ ಮಹಾಂತನ ಪಾದಾ ಹಿಡೀಬೇಕು
ಮೂಕನಾಗಬೇಕು ಜಗದೊಳು ಜ್ವಾಕ್ಯಾಗಿರಬೇಕು
ಮೂಕನಾಗಬೇಕು ಜಗದೊಳು ಜ್ವಾಕ್ಯಾಗಿರಬೇಕು

ಕಾಕಬುದ್ಧಿ ಕಡೇ ಘಾಯಿಸಲಾರದೆ
ಲೋಕದ ಗೊಡವೀ ನಿನಗ್ಯಾಕ ಬೇಕು
ಮೂಕನಾಗಬೇಕು ಜಗದೊಳು ಜ್ವಾಕ್ಯಾಗಿರಬೇಕು

Share this content:

Post Comment

You May Have Missed