Loading Now

ಮತದಾನ ಮಾಡದವರಿಗೆ ಕಿಚ್ಚ ಕ್ಲಾಸ್‌..! ಕಡ್ಡಾಯ ಕಾನೂನು ತರಬೇಕು ಎಂದ ಉಪ್ಪಿ

ಮತದಾನ ಮಾಡದವರಿಗೆ ಕಿಚ್ಚ ಕ್ಲಾಸ್‌..! ಕಡ್ಡಾಯ ಕಾನೂನು ತರಬೇಕು ಎಂದ ಉಪ್ಪಿ

Kiccha Sudeep cast his vote : ರಾಜ್ಯದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಸ್ಯಾಂಡಲ್‌ವುಡ್‌ ನಟ ನಟಿಯರು ಮತದಾನ ಮಾಡುವ ಮೂಲಕ ಮತ ಜಾಗೃತಿ ಮೂಡಿಸುತ್ತಿದ್ದಾರೆ. ಈ ಪೈಕಿ ಬೆಂಗಳೂರಿನ ಪುಟ್ಟೇನಹಳ್ಳಿ ಆಕ್ಸ್​ಫರ್ಡ್ ಶಾಲೆಯಲ್ಲಿ ಕುಟುಂಬ ಸಮೇತ ಕಿಚ್ಚ ಸುದೀಪ್ ಮತದಾನ ಮಾಡಿದರು.

ಮತದಾನದ ನಂತರ ಮಾತನಾಡಿದ ಕಿಚ್ಚ, ದೇಶದ ಮೇಲೆ ಪ್ರೀತಿ ಇರುವ ಪ್ರತಿಯೊಬ್ಬರು ಮತದಾನ ಮಾಡಬೇಕು, ಎಷ್ಟೇ ಹೇಳಿದ್ರೂ ಕೆಲವರು ಮತ ಹಾಕುವುದಿಲ್ಲ. ಅಂತವರಿಗೆ ನಾವು ಏನು ‌ಮಾಡೋಕೆ ಆಗುತ್ತೆ ಹೇಳಿ..? ಯಾರು ಮತದಾನ ಮಾಡ್ತಾರೆ ಅಂತಹವರಿಗೆ ಗೌರವ ಕೊಡೋಣ ಎಂದು ಮತದಾನದ ಮಹತ್ವ ಮಾತನಾಡಿದರು.

ಅಲ್ಲದೆ, ನಟ ಉಪೇಂದ್ರ ಮಾತನಾಡಿ, ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಬೇಕು. ಕೆಲವರು ಓಟ್​ ಮಾಡುತ್ತಿಲ್ಲ. ಅದಕ್ಕಾಗಿ ಕಡ್ಡಾಯ ಮತದಾನ ಎಂಬ ಕಾನೂನು ತರಬೇಕು. ಈ ರೀತಿ ಮಾಡಿದರೆ ಮಾತ್ರ ಎಲ್ಲರೂ ಮತಗಟ್ಟೆಗೆ ಬಂದು ಮತ ಚಲಾಯಿಸುತ್ತಾರೆ ಎಂದು ಹೇಳಿದರು.

Share this content:

Post Comment

You May Have Missed