ನಾನು ಮಾಡಿದ ತ್ಯಾಗಕ್ಕೆ ಬೆಲೆಯೇ ಇಲ್ಲ, ಕುಮಾರಸ್ವಾಮಿ ಒಂದು ಸಲ ನನಗೆ ಫೋನ್ ಮಾಡಿಲ್ಲ : ಸುಮಲತಾ ಬೇಸರ
Sumalatha ambareesh on HD Kumaraswamy : ಮಾಜಿ ಮುಖ್ಯಮಂತ್ರಿ, ಲೋಕಸಭೆ ಚುನಾವಣೆ ಜೆಡಿಎಸ್ ಮಂಡ್ಯ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ಪರ ಪ್ರಚಾರ ಮಾಡದಕ್ಕೆ ಸುಮಲತಾ ಅಂಬರೀಶ್ ಅವರು ಕಾರಣ ಬಿಚ್ಚಿಟ್ಟಿದ್ದಾರೆ. ನಾನು ಇಲ್ಲದೇ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎನ್ನುವ ಭಾವನೆ ಅವರಲ್ಲಿ ಮೂಡಿರಬೇಕು, ಅದಕ್ಕೆ ನನ್ನನ್ನು ಎಲ್ಲ ಸಭೆಗಳಲ್ಲಿ ದೂರವಿಟ್ಟರು ಅಂತ ಬೇಸರ ವ್ಯಕ್ತಪಡಿಸಿದ್ದಾರೆ.
ಇಂದು ಮತದಾನದ ನಂತರ ಮಾತನಾಡಿದ ಅವರು, ಜಿಡಿಎಸ್ ನಾಯಕರು ನಡೆಸಿದ ಯಾವುದೇ ಕಾರ್ಯಕ್ರಮ ಮತ್ತು ಸಭೆಗೆ ನನ್ನನ್ನು ಕರೆದಿಲ್ಲ. ನಾನಿಲ್ಲದೆಯೂ ಚುನಾವಣೆ (Karnataka Lok Sabha Elections Phase 2 Live Updates) ಗೆಲ್ಲುತ್ತೇವೆ ಎಂಬ ಭಾವನೆ ಅವರದ್ದು. ಅವರ ಈ ವರ್ತನೆ ನನಗೆ ತುಂಬಾ ಬೇಸರ ತಂದೆ ಎಂದು ಸುಮಲತಾ ಅವರು ಹೇಳಿದರು.
ನನ್ನ ಬೆಂಬಲಿಗರು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಕೊನೆಯವರೆಗೂ ಕೆಳಿಕೊಂಡರು. ಆದರೆ ನಾನು ಅವರಿಗೆ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ನೋಡುವುದು ನಮ್ಮೆಲ್ಲರ ಗುರಿಯಾಗಿರಬೇಕು ಎಂದು ಹೇಳಿದ್ದೆ. ಆದ್ರೆ ಈಗ ಜೆಡಿಎಸ್ ವರ್ತನೆ ನೋಡಿ ನಾನು ಮಾಡಿದ ತ್ಯಾಗಕ್ಕೆ ಏನೂ ಬೆಲೆಯಿಲ್ಲದಂತಾಗಿದೆ ಎಂದರು.
Share this content:
Post Comment