ಮತದಾನದ ಹಕ್ಕು ಚಲಾಯಿಸಿದ ಸ್ಯಾಂಡಲ್‌ವುಡ್ ಸ್ಟಾರ್ಸ್..! ವೋಟ್ ಮಾಡಿದ ನಟ ನಟಿಯರ ಲಿಸ್ಟ್ ಇಲ್ಲಿದೆ
ಜೆ.ಪಿ ನಗರದಲ್ಲಿರುವ ಸೇಂಟ್ ಪೌಲ್ ಸ್ಕೂಲ್ ಮತಗಟ್ಟೆಯಲ್ಲಿ ನಟ ಸಪ್ತಮಿಗೌಡ ಅವರು ಮತದಾನ ಮಾಡಿದ್ದಾರೆ.
ಮಲ್ಲೇಶ್ವರಂ ಎಂಇಎಸ್ ಕಾಲೇಜಿನಲ್ಲಿ ಮತ ಚಲಾಯಿಸಿದ ನವರಸ ನಾಯಕ ಜಗ್ಗೇಶ್
ಅಶ್ವಿನಿ ಪುನೀತ್ ರಾಜ್ ಕುಮಾರ್ ಮತದಾನ ಮಾಡಿದ್ದಾರೆ. ಸದಾಶಿವ ನಗರದ ಪೂರ್ಣ ಪ್ರಜ್ಞ ಎಜುಕೇಶನ್ ಸೆಂಟರ್ನಲ್ಲಿ ಮತದಾನ ಮಾಡಿದ್ದಾರೆ. ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ರಾಘಣ್ಣ ದಂಪತಿ ವೋಟಿಂಗ್ ಮಾಡಿದ್ದಾರೆ.
ಹೊಸಕೆರೆ ಹಳ್ಳಿ ಮತದಾನ ಕೇಂದ್ರಕ್ಕೆ ನಟ ರಾಕಿಂಗ್ ಸ್ಟಾರ್ ಯಶ್ ತಡವಾಗಿ ಬರಲಿದ್ದಾರೆ. ಪ್ಲಾನ್ ಪ್ರಕಾರ ಅವರು ಇಂದು ಬೆಳಗ್ಗೆ 8:30ಕ್ಕೆ ಮತಚಲಾಯಿಸಬೇಕಿತ್ತು. ಕಾರಣಾಂತರಗಳಿಂದ 11 ಗಂಟೆ ನಂತರ ವೋಟ್ ಮಾಡಲು ಯಶ್
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಶಿವಾಜಿನಗರ ವಿಧಾನಸಭೆ ಕ್ಷೇತ್ರದ ವಸಂತನಗರದ ಮೌಂಟ್ ಕಾರ್ಮೆಲ್ ನಲ್ಲಿ ಕುಟುಂಬ ಸಮೇತ ಮತದಾನ ಮಾಡಿದ ನಟ ಶ್ರೀಮುರಳಿ
ನಟಿ ಅಮೂಲ್ಯ ಕೂಡಾ ಬೆಳ್ಳಂಬೆಳಗ್ಗೆಯೇ ಬಂದು ವೋಟ್ ಮಾಡಿದ್ದಾರೆ.
ಮತದಾನಕ್ಕೆ ಆಗಮಿಸಿದ ಹಿರಿಯ ನಟಿ ಪ್ರೇಮ.ಬೆಂಗಳೂರು ಮಂಗಮ್ಮನಪಾಳ್ಯದ ಜಾನ್ಸನ್ ಶಾಲೆಯಲ್ಲಿ ಮತದಾನಮತದಾನಕ್ಕೆ ಬಂದ ನಟಿ.
ಅರಸಿಕೆರೆಯ ಕಾಳೇನಹಳ್ಳಿಯಲ್ಲಿ ಕುಟುಂಬ ಸಮೇತರಾಗಿ ಮತದಾನ ಮಾಡಿದ ನಟ ಡಾಲಿ ಧನಂಜಯ. ಬಿಳಿ ಪಂಚೆ ಹಾಗೂ ಬಿಳಿ ಶರ್ಟ್ ಧರಿಸಿ ಹಳ್ಳಿ ಸ್ಟೈಲ್ ನಲ್ಲಿ ಬಂದು ಹಕ್ಕು ಚಲಾಯಿಸಿದ ನಟ.
Share this content:
Post Comment