Loading Now

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾಗೆ ಸಂಕಷ್ಟ..! ಸೈಬರ್‌ ಕ್ರೈಂನಿಂದ ನಟಿಗೆ ಸಮನ್ಸ್‌ ಜಾರಿ

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾಗೆ ಸಂಕಷ್ಟ..! ಸೈಬರ್‌ ಕ್ರೈಂನಿಂದ ನಟಿಗೆ ಸಮನ್ಸ್‌ ಜಾರಿ

Tamannaah Bhatia Summoned : ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾಗೆ ಸಂಕಷ್ಟ ಎದುರಾಗಿದೆ. ಮಹಾರಾಷ್ಟ್ರ ಸೈಬರ್ ಸೆಲ್ ತಮನ್ನಾ ಅವರಿಗೆ ಸಮನ್ಸ್ ಕಳುಹಿಸಿದೆ ಎಂದು ವರದಿಯಾಗಿದೆ. ಸಂಜಯ್ ದತ್ ನಂತರ ಇದೀಗ ನಟಿ ತಮನ್ನಾ ಅವರ ಹೆಸರೂ ಅಕ್ರಮ ಸ್ಟ್ರೀಮಿಂಗ್ ಪ್ರಕರಣದಲ್ಲಿ ತಳಕು ಹಾಕಿಕೊಂಡಿದ್ದು, ಇದಕ್ಕೆ ಸಂಬಂಧಪಟ್ಟಂತೆ ಸೈಬರ್‌ ಸೆಲ್‌ ಅಧಿಕಾರಿಗಳು ನಟಿಗೆ ನೋಟಿಸ್‌ ನೀಡಿದ್ದಾರೆ.

ಹೌದು.. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಂಗ ಸಂಸ್ಥೆ ವಯಾಕಾಮ್ 18, ಐಪಿಎಲ್ 2023 ರ ಅಕ್ರಮ ಸ್ಟ್ರೀಮಿಂಗ್‌ನಿಂದಾಗಿ ಭಾರಿ ನಷ್ಟವನ್ನು ಅನುಭವಿಸಿತು. ಈ ಹಿನ್ನೆಲೆ ಕೇಸ್‌ ದಾಖಲಿಸಲಾಗಿತ್ತು. ಇದೀಗ ಈ ಪ್ರಕರಣದಲ್ಲಿ ನಟಿ ತಮನ್ನಾ ಭಾಟಿಯಾ ಅವರ ಹೆಸರು ಕೂಡ ಕೇಳಿಬಂದಿದೆ.

ಅಲ್ಲದೆ, ನಟಿಗೆ ಏಪ್ರಿಲ್ 29 ರಂದು ಸೈಬರ್ ಶಾಖೆಯ ಮುಂದೆ ಹಾಜರಾಗಬೇಕೆಂದು ತಿಳಿಸಿ ಮಹಾರಾಷ್ಟ್ರ ಸೈಬರ್ ಅಧಿಕಾರಿಗಳು ಸಮನ್ಸ್ ಕಳುಹಿಸಿದ್ದಾರೆ. ಮಹದೇವ್ ಬೆಟ್ಟಿಂಗ್ ಆಪ್‌ನ ಅಂಗ ಸಂಸ್ಥೆ ಫೇರ್‌ಪ್ಲೇ ಪ್ರಚಾರಕ್ಕೆ ಸಂಬಂಧಿಸಿದಂತೆ ಸೈಬರ್ ಸೆಲ್ ತಮನ್ನಾಗೆ ಸಮನ್ಸ್ ಕಳುಹಿಸಿದೆ ಎಂದು ವರದಿಯಾಗಿದೆ.

ಸಮನ್ಸ್‌ ಪ್ರಕಾರ, ತಮನ್ನಾ ಭಾಟಿಯಾ ಏಪ್ರಿಲ್ 29 ರಂದು ಸೈಬರ್ ಅಧಿಕಾರಿಗಳ ಮುಂದೆ ಹಾಜರಾಗಬೇಕಿದೆ. ಇನ್ನು ಏಪ್ರಿಲ್ 23 ರಂದು ನಟ ಸಂಜಯ್ ದತ್ ಅವರಿಗೆ ಸಮನ್ಸ್ ನೀಡಲಾಗಿತ್ತು. ಆದರೆ ಅವರು ವಿದೇಶದಲ್ಲಿರುವ ಕಾರಣ, ಮುಂದಿನ ದಿನಾಂಕ ಮತ್ತು ಸಮಯವನ್ನು ನೀಡುವಂತೆ ಸೈಬರ್ ಸೆಲ್‌ಗೆ ನಟನಿಗೆ ಸೂಚಿಸಿದೆ.

Share this content:

Post Comment

You May Have Missed