Loading Now

ಸೆಟ್ಟೇರಲಿದೆ ರಾಮ್‌ ಚರಣ್‌ – ಅಲ್ಲು ಅರ್ಜುನ್‌ ಸಿನಿಮಾ..! ಹಿಸ್ಟರಿ ಕ್ರಿಯೇಟ್‌ ಮಾಡೋಕೆ ಅಳಿಯ-ಮಾವ ರೆಡಿ

ಸೆಟ್ಟೇರಲಿದೆ ರಾಮ್‌ ಚರಣ್‌ – ಅಲ್ಲು ಅರ್ಜುನ್‌ ಸಿನಿಮಾ..! ಹಿಸ್ಟರಿ ಕ್ರಿಯೇಟ್‌ ಮಾಡೋಕೆ ಅಳಿಯ-ಮಾವ ರೆಡಿ

Ram charan Allu arjun new movie : ಗ್ಲೋಬಲ್‌ ಸ್ಟಾರ್‌ ರಾಮ್ ಚರಣ್ ಮತ್ತು ಸ್ಟೈಲಿಶ್‌ ಐಕಾನ್‌ ಅಲ್ಲು ಅರ್ಜುನ್ ಕಾಂಬಿನೇಷನ್‌ನ ಸಿನಿಮಾ ನೋಡಬೇಕು ಎನ್ನುವುದು ಅಭಿಮಾನಿಗಳ ಆಸೆ. ಇದೀಗ ಈ ಕುರಿತು ಸಿಹಿ ಸುದ್ದಿಯೊಂದು ಹೊರಬಿದ್ದಿದೆ.. ಇಂಟ್ರಸ್ಟಿಂಗ್‌ ವರದಿ ಇಲ್ಲಿದೆ ನೋಡಿ..

ರಾಮ್‌ ಚರಣ್‌ ಮತ್ತು ಅಲ್ಲು ಅರ್ಜುನ್‌ ಸಂಬಂಧಿಕರು ಅಂತ ಎಲ್ಲರಿಗೂ ಗೊತ್ತು. ಇವರು ಸಂಬಂಧದಲ್ಲಿ ಅಳಿಯ ಮಾವ ಆಗ್ಬೇಕು. ಪರಸ್ಪರ ಉತ್ತಮ ಬಾಂಧವ್ಯ ಹೊಂದಿರುವ ನಟರು, ಆಗಾಗ ಒಟ್ಟಿಗೆ ಕಾಣಿಸಿಕೊಂಡು ಅಭಿಮಾನಿಗಳಿಗೆ ಖುಷಿ ನೀಡುತ್ತಾರೆ. ಇಬ್ಬರನ್ನು ಒಂದೇ ಸಿನಿಮಾದಲ್ಲಿ ನೋಡ್ಬೇಕು ಅನ್ನೋದು ಅವರ ಅಭಿಮಾನಿಗಳ ದೊಡ್ಡ ಆಸೆ.

ಈ ಹಿಂದೆ ‘ಎವಡು’ ಎಂಬ ಸಿನಿಮಾದ ಮೂಲಕ ಇಬ್ಬರು ಒಂದೇ ಚಿತ್ರದಲ್ಲಿ ನಟಿಸಿದ್ದರು. ಆದ್ರೆ, ಅಲ್ಲು ಅರ್ಜುನ್ ನಾಯಕನಾಗಿ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಇವರಿಬ್ಬರ ಕಾಂಬಿನೇಷನ್ ನಲ್ಲಿ ಸೂಪರ್ ಹಿಟ್ ಸಿನಿಮಾವೊಂದು ತೆರೆಗೆ ಬರಲು ರೆಡಿಯಾಗುತ್ತಿದೆ.

ರಾಮ್ ಚರಣ್ ಅಲ್ಲು ಅರ್ಜುನ್ ಕಾಂಬೋ ಸಿನಿಮಾ ಯಾವಾಗ ಸೆಟ್‌ ಏರುತ್ತೆ, ಯಾವಾಗ ಬಿಡುಗಡೆಯಾಗುತ್ತೆ ಎಂಬ ಸ್ಪಷ್ಟ ಮಾಹಿತಿ ಇಲ್ಲ. ಆದರೆ, ಇವರಿಬ್ಬರ ಕಾಂಬಿನೇಷನ್ ನಲ್ಲಿ ಚಿತ್ರ ಬಂದರೆ ಎಲ್ಲಾ ದಾಖಲೆಗಳನ್ನು ಮುರಿಯಲಿದೆ ಎಂಬ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಕ್ರಮದಲ್ಲಿ ಇವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಸಿನಿಮಾ ಹೇಗಿರಲಿದೆ ಅನ್ನೋದು ಕೂಡ ತಿಳಿದು ಬರಬೇಕಿದೆ. ಇನ್ನು ತಮಿಳಿನ ನಿರ್ದೇಶಕ ಅಟ್ಲಿ ಈಗಾಗಲೇ ಸ್ಕ್ರಿಪ್ಟ್ ಬರೆದಿದ್ದು, ಅಲ್ಲು ಅರ್ಜುನ್ ಕಥೆ ಕೇಳಿದ್ದಾರೆ ಎನ್ನಲಾಗಿದೆ. ಅದಕ್ಕೆ ರಾಮ್ ಚರಣ್ ಸಹ ಗ್ರೀನ್ ಸಿಗ್ನಲ್ ಕೊಟ್ಟರೆ ಈ ಚಿತ್ರ ನಿರ್ಮಾಣವಾಗಲಿದೆ ಎಂದು ತಿಳಿದು ಬಂದಿದೆ..

Share this content:

Post Comment

You May Have Missed