ಡಾಲಿ ಧನಂಜಯ್ ನಟನೆಯ ʼಕೋಟಿʼ ಸಿನಿಮಾದ ಟೀಸರ್ ರಿಲೀಸ್..!
Kotee movie teaser : ಡಾಲಿ ಧನಂಜಯ್ ನಟನೆಯ ಪರಮ್ ನಿರ್ದೇಶನದ ʼಕೋಟಿʼ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಧನಂಜಯ್ ಕೋಟಿ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ಮಧ್ಯಮ ವರ್ಗದ ಜನ ಜೀವನದ ಕಥಾಹಂದರ ಹೊಂದಿರುವ ಈ ಸಿನಿಮಾ ಇದೇ ಜೂನ್ 14ಕ್ಕೆ ರಿಲೀಸ್ ಆಗಲಿದೆ.
ಇಂದು ಬಿಡುಗಡೆಯಾಗಿರುವ ಟೀಸರ್ ಅದ್ಭುತವಾಗಿ ಮೂಡಿ ಬಂದಿದ್ದು, ಸಾಲ ತೀರಿಸಲು ಹಣದ ಹಿಂದೆ ಬೀಳುವ ಕೋಟಿಗೆ ಎದುರಾಗುವ ಕಷ್ಣಗಳನ್ನು ಟೀಸರ್ನಲ್ಲಿ ನೋಡಬಹುದು. ಎಲ್ಲರೊಳಗೊಬ್ಬ ಕಳ್ಳನಿದ್ದಾನೆ ಎನ್ನುವ ಮಾತು ಇಂದಿನ ಸಮಾಜದಲ್ಲಿ ಸ್ವಾರ್ಥಕ್ಕಾಗಿ.. ಹಣಕ್ಕಾಗಿ… ಏನು ಬೇಕಾದರೂ ಮಾಡುವ ಜನರ ಮನಸ್ಥಿತಿಯನ್ನು ವಿವರಿಸುತ್ತದೆ.
ಟೀಸರ್ನಲ್ಲಿ ರಂಗಾಯಣ ರಘು ಪಂಚಿಂಗ್ ಡೈಲಾಗ್ ಹೈಲೈಟ್, ಕಳ್ಳತನ, ಮೋಸ, ವಂಚನೆ ಮಾಡದೆ ಸತ್ಯ ಮಾರ್ಗದಲ್ಲಿ ಹಣ ಗಳಿಸಲು ಸಾಧ್ಯವೆ ಎಂಬ ಪ್ರಶ್ನೆಗೆ ನಾಯಕ ಕೋಟಿ ಉತ್ತರ ಹುಡುಕುವುದನ್ನು ಕಾಣಬಹುದು. ಕೊನೆಗೆ ಮಾಡಿದ ಸಾಲವನ್ನು ತೀರಿಸಲು ಡಾಲಿ (Daali Dhananjay) ನ್ಯಾಯದ ಹಾದಿ ತುಳಿತಾನಾ ಇಲ್ಲವೇ ತಪ್ಪು ದಾರಿಯಲ್ಲಿ ನಡಿತಾನಾ ಎನ್ನುವುದ ಸಿನಿಮಾ ನೋಡಿದ ಮೇಲೆ ಗೊತ್ತಾಗುತ್ತೆ.
ಕೋಟೆ ಸಿನಿಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದೆ. ಪರಮ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಹೊಯ್ಸಳ ಸಿನಿಮಾದ ನಂತರ ಧನಂಜಯ್ ಒಂದು ವರ್ಷದ ಬಳಿಕ ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ. ಇದೇ ಜೂನ್ 14ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ.
ಸಿನಿಮಾ ಸುದ್ದಿಗಳು, ಲೆಟೆಸ್ಟ್ ಅಪ್ಡೆಟ್ಸ್ಗಾಗಿ ಈಗಲೇ ನಮ್ಮ Movie Magic ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಿ
Facebook Link – http://surl.li/sinyi
Instagram Link – http://surl.li/sinyq
WhatsApp Channel- http://surl.li/sinza
Share this content:
Post Comment