ತನ್ನ ತಂಗಿಗಾಗಿ ಹೆಸರನ್ನೇ ಬದಲಾಯಿಸಿಕೊಂಡ ದುನಿಯಾ ವಿಜಯ್ ಪುತ್ರಿ..!
Duniya Vijay daughter : ದುನಿಯಾ ವಿಜಯ್ ಮಗಳು ಮೋನಿಕಾ ಸ್ಯಾಂಡಲ್ವುಡ್ಗೆ ಕಾಲಿಡಲು ರೆಡಿಯಾಗಿದ್ದಾರೆ. ಇದರ ನಡುವೆ ಅವರು ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ. ಮೋನಿಕಾ ತಮ್ಮ ಹೆಸರನ್ನು ಬದಲಾಯಿಸಲು ಅವರ ತಂಗಿಯೇ ಕಾರಣ ಅಂತ ಹೇಳಿಕೊಂಡಿದ್ದು, ಹೆಸರು ಬದಲಿಸಿಕೊಂಡಿರೋ ಹಿಂದಿನ ಸೀಕ್ರೆಟ್ ಕೂಡ ರಿವೀಲ್ ಮಾಡಿದ್ದಾರೆ.
ಹೌದು.. ದುನಿಯಾ ವಿಜಯ್ ಅವರಿಗೆ ಒಟ್ಟು ಮೂವರು ಮಕ್ಕಳಿದ್ದಾರೆ. ಮೋನಿಕಾ, ಮೋನಿಶಾ ಎನ್ನುವ ಇಬ್ಬರು ಹೆಣ್ಣುಮಕ್ಕಳು, ಸಾಮ್ರಾಟ್ ಎನ್ನುವ ಒರ್ವ ಮಗ ಇದ್ದಾನೆ. ಇದೀಗ ಮೋನಿಕಾ ಸಿನಿರಂಗ ಪ್ರವೇಶ ಮಾಡಲು ರೆಡಿಯಾಗಿದ್ದು ಅಪ್ಪನ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಡಲಿದ್ದಾಳೆ.
ಕಾಟೇರ ಸಿನಿಮಾಗೆ ಕಥೆ ಬರೆದಿದ್ದ ಜಡೇಶ್ ಕುಮಾರ್ ಹಂಪಿ ನಿರ್ದೇಶನದ ಸಿನಿಮಾದಲ್ಲಿ ಅಪ್ಪ ವಿಜಯ್ ಜೊತೆ ಮೋನಿಕಾ ತೆರೆ ಹಂಚಿಕೊಳ್ಳಲಿದ್ದಾರೆ. ಇನ್ನು ಮುಂಬೈನ ಅನುಪಮ್ ಖೇರ್ ಅಭಿನಯ ಶಾಲೆಯಲ್ಲಿ ನಟನೆಯನ್ನು ಕಲಿತಿದ್ದಾಳೆ ವಿಜಯ್ ಪುತ್ರಿ. ಸಧ್ಯ ಮೋನಿಶಾ ತಮ ಹೆಸರನ್ನು ರಿತನ್ಯ ಅಂತ ಬದಲಾಯಿಸಿಕೊಂಡಿದ್ದಾರೆ.
ಸಡನ್ನಾಗಿ ಹೆಸರು ಬದಲಾಯಿಸಕೊಳ್ಳಲು ಕಾರಣವೇನು ಅಂತ ಕೇಳಿದ್ರೆ, ತಂಗಿ ಹೆಸರು ಮೋನಿಕಾ ಅಂತ ಇದೆ. ಇದರಿಂದ ನಮ್ಮಲ್ಲಿ ಮೋನಿಕಾ ಯಾರು.? ಮೋನಿಷಾ ಯಾರು? ಅನ್ನೋದೇ ಸಡನ್ ಆಗಿ ಯಾರಿಗೂ ತಿಳಿಯುತ್ತಲೇ ಇರಲಿಲ್ಲ. ನನ್ನ ಕೆಲವೊಂದಿಷ್ಟು ವಿಡಿಯೋಗಳಿಗೆ ಅವಳ ಹೆಸರನ್ನು ಹಾಕಲಾಗಿತ್ತು ಅದಕ್ಕಾಗಿ ಹೆಸರು ಬದಲಾಯಿಸಿಕೊಂಡೆ ಅಂತ ಹೇಳಿದ್ದಾರೆ.
Share this content:
Post Comment