Loading Now

GOAT Movie : ದಳಪತಿ ವಿಜಯ್ ಅಭಿನಯದ ʼಗೋಟ್ʼ ರಿಲೀಸ್ ಡೇಟ್ ಅನೌನ್ಸ್‌..!

GOAT Movie : ದಳಪತಿ ವಿಜಯ್ ಅಭಿನಯದ ʼಗೋಟ್ʼ ರಿಲೀಸ್ ಡೇಟ್ ಅನೌನ್ಸ್‌..!

Vijay GOAT Movie release date : ಕಾಲಿವುಡ್‌ ಸೂಪರ್‌ ಸ್ಟಾರ್‌, ದಳಪತಿ ವಿಜಯ್‌ ನಟನೆಯ ಬಹುನಿರೀಕ್ಷಿತ ಸಿನಿಮಾ GOAT ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ. ಈ ಸಿನಿಮಾದ ನಿರ್ಮಾಪಕಿ ಅರ್ಚನಾ ಕಲ್ಪಾತಿ ಮತ್ತು ನಿರ್ದೇಶಕ ವೆಂಕಟ್ ಪ್ರಭು ಅವರು ತಮ್ಮ ಟ್ಟಿಟರ್‌ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಹೌದು.. ದಳಪತಿ ವಿಜಯ್ ಮತ್ತು ವೆಂಕಟ್ ಪ್ರಭು ಮೈತ್ರಿ ಕಾಂಬಿನೇಷನ್‌ನ ಗೋಟ್‌ (GOAT Movie) ಸಿನಿಮಾದ ಶೂಟಿಂಗ್ ಪ್ರಸ್ತುತ ಭರದಿಂದ ಸಾಗುತ್ತಿದೆ. ಈ ಚಿತ್ರಕ್ಕೆ GOAT – The Greatest Of All The Time ಎಂದು ಶೀರ್ಷಿಕೆ ಇಡಲಾಗಿದೆ. ಇದೀಗ ಈ ಸಿನಿಮಾದ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡುವ ಮೂಲಕ ಚಿತ್ರತಂಡ ವಿಜಯ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ನೀಡಿದೆ.

ಹೌದು.. ಗೋಟ್‌ ದಳಪತಿ ವಿಜಯ್ ನಟನೆಯ ಸಿನಿಮಾ, ಈ ಸಿನಿಮಾದಲ್ಲಿ ಪ್ರಶಾಂತ್, ಮೋಹನ್, ಪ್ರಭುದೇವ, ಜಯರಾಮ್, ಗಣೇಶ್, ಯೋಗಿ ಬಾಬು, ವೈಭವ್, ಸ್ನೇಹಾ, ಲೈಲಾ, ಮೀನಾಕ್ಷಿ ಚೌಧರಿ ಸೇರಿದಂತೆ ಸಾಕಷ್ಟು ಸ್ಟಾರ್‌ ಕಲಾವಿದರು ನಟಿಸುತ್ತಿದ್ದಾರೆ. ಹಲವು ವರ್ಷಗಳ ನಂತರ ಯುವನ್ ಶಂಕರ್ ರಾಜಾ ವಿಜಯ್ ಚಿತ್ರಕ್ಕೆ ಸಂಗೀತ ನೀಡಿದ್ದು ಈ ಚಿತ್ರದ ವಿಶೇಷ.

ಬಿಗಿಲ್ ಚಿತ್ರವನ್ನು ನಿರ್ಮಾಣ ಮಾಡಿದ್ದ ಎಜಿಎಸ್ ಎಂಟರ್ಟೈನ್ಮೆಂಟ್ ಈ ಸಿನಿಮಾವನ್ನು ನಿರ್ಮಿಸಿದೆ. ಕಳೆದ ವರ್ಷ ಆರಂಭವಾದ GOAT ಚಿತ್ರದ ಶೂಟಿಂಗ್ ಚೆನ್ನೈ, ದಕ್ಷಿಣ ಆಫ್ರಿಕಾ, ಹೈದರಾಬಾದ್ ಮತ್ತು ಪುದುಚೇರಿಯಲ್ಲಿ ನಡೆದಿತ್ತು. ಅದೀಗ ಅಂತಿಮ ಹಂತಕ್ಕೆ ಬಂದಿದೆ.

ಚಿತ್ರದ ನಿರ್ಮಾಪಕಿ ಅರ್ಚನಾ ಕಲ್ಪಾತಿ ಅವರು ತಮ್ಮ ಎಕ್ಸ್ ಸೈಟ್ ನಲ್ಲಿ ಗೋಟ್‌ ಸಿನಿಮಾಗೆ ಸಂಬಂಧಪಟ್ಟ ಪೋಸ್ಟ್‌ ಹಂಚಿಕೊಂಡು ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ್ದಾರೆ. ಬಹುನಿರೀಕ್ಷಿತ ಚಿತ್ರ ಸೆಪ್ಟೆಂಬರ್ 5 ರಂದು ಅಂದರೆ ವಿನಾಯಕ ಚತುರ್ಥಿಯಂದು ವಿಶ್ವದಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

ಸಿನಿಮಾ ಸುದ್ದಿಗಳು, ಲೆಟೆಸ್ಟ್‌ ಅಪ್‌ಡೆಟ್ಸ್‌ಗಾಗಿ ಈಗಲೇ ನಮ್ಮ Movie Magic ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಿ

Facebook Link – http://surl.li/sinyi
Instagram Link – http://surl.li/sinyq
WhatsApp Channel- http://surl.li/sinza

Share this content:

Post Comment

You May Have Missed